ಲಕ್ನೋ, ಮೇ, 04 (DaijiworldNews/MS): ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಖಾಸಗಿ ಕಾರ್ಯಕ್ರಮದ ಅಂಗವಾಗಿ ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ 28 ವರ್ಷಗಳ ಬಳಿಕ ಯೋಗಿ ಆದಿತ್ಯನಾಥ್ ಅವರು ತೆರಳಿದ್ದು, ಈ ವೇಳೆ ತಮ್ಮ ತಾಯಿ ಸಾವಿತ್ರಿ ದೇವಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವ ಮುನ್ನ ಯೋಗಿ ಆದಿತ್ಯನಾಥ ಸಂಸದರಾಗಿದ್ದು ಸನ್ಯಾಸ ದೀಕ್ಷೆ ಪಡೆದ ಬಳಿಕ ತಮ್ಮ ಕುಟುಂಬದಿಂದ ದೂರವಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವ ಮುನ್ನ ಯೋಗಿ ಆದಿತ್ಯನಾಥ ಸಂಸದರಾಗಿದ್ದರು.
ಇದೀಗ ತಾಯಿ ಸಾವಿತ್ರಾ ದೇವಿ ಅವರನ್ನು ಭೇಟಿಯಾಗಿ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಿರುವ ಫೋಟೋವನ್ನು ಯೋಗಿ ಆದಿತ್ಯನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಯೋಗಿ ಸಹೋದರಿ ಯೋಗಿ ಆದಿತ್ಯನಾಥ್ ಬಳಿ ವಿಶೇಷ ಮನವಿ ಮಾಡಿದ್ದರು. ಒಮ್ಮೆಯಾದರೂ ತಾಯಿಯನ್ನು ಭೇಟಿಯಾಗಿ ಎಂದಿದ್ದರು. ಗೋರಖ್ಪುರ ಮಠಕ್ಕೆ ಬಂದ ಬಳಿಕ ಯೋಗಿ ತಾಯಿಯನ್ನು ಭೇಟಿಯಾಗಿಲ್ಲ. ನಿಮ್ಮ ಭೇಟಿಗಾಗಿ ತಾಯಿ ಕಾಯುತ್ತಿದ್ದಾರೆ ಎಂದು ಯೋಗಿ ಸಹೋದರಿ ಹೇಳಿದ್ದರು.