ಬೆಂಗಳೂರು, ಮೇ 03 (DaijiworldNews/SM): ಪಿಎಸ್ ಐ ನೇಮಕದ ಪರೀಕ್ಷೆಯ ಭ್ರಷ್ಟಾಚಾರದ ವಿಚಾರ ಮಾಧ್ಯಮದಲ್ಲಿ ನಿರಂತರ ಚರ್ಚೆಯಾಗುತ್ತಿದ್ದರೂ ಸರಿಯಾಗಿ ತನಿಖೆಯಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ವಿಚಾರಣೆಗೆ ಕರೆಸಿದ್ದಾಗ ದರ್ಶನ್ ಗೌಡ ಯಾವ ಹೇಳಿಕೆ ಕೊಟ್ಟಿದ್ದಾನೆ?. ಆತನನ್ನು ಯಾಕೆ ಪೂರ್ಣಪ್ರಮಾಣದಲ್ಲಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಲಾಯಿತು?" ಈ ಎಲ್ಲಾ ವಿಚಾರಗಳು ಪ್ರಶ್ನಾತೀತವಾಗಿವೆ. ಇಂತಹ ಪ್ರಕರಣವನ್ನು ಸರಕಾರ, ಇಲಾಖೆ ಸಮರ್ಪಕವಾಗಿ ಲೋಪಗಳಿಲ್ಲದೆ ತನಿಖೆ ನಡೆಸಬೇಕಿದೆ ಎಂದು ಅವರು ಹೇಳಿದರು.
ಒಂದೊಮ್ಮೆ ಆತನ ವಿಚಾರಣೆ ಮಾಡಿದರೆ ಸಚಿವರ ಸಂಪರ್ಕ ಬಹಿರಂಗವಾಗುತ್ತದೆ? ಎಂಬ ಕಾರಣಕ್ಕೆ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.