ಚೆನ್ನೈ, ಮೇ 03 (DaijiworldNews/DB): ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ನೆರವಿಗೆ ಧಾವಿಸಿರುವ ತಮಿಳುನಾಡು ಸರ್ಕಾರ, ಅಕ್ಕಿ, ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಗಳನ್ನು ಕಳುಹಿಸಲು ಮುಂದಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಕೇಂದ್ರ ಸರ್ಕಾರದ ಅನುಮತಿ ಪಡೆದು ಮೊದಲ ಹಂತದಲ್ಲಿ ಅಕ್ಕಿ, ಹಾಲಿನ ಪುಡಿ, ಜೀವರಕ್ಷಕ ಔಷಧಿ ಕಳುಹಿಸಲಾಗುವುದು. ಸರ್ಕಾರದ ಈ ನೆರವಿಗೆ ಕೈ ಜೋಡಿಸಲು ಆಸಕ್ತರಿರುವ ನಾಗರಿಕರು ಕೂಡಾ ದೇಣಿಗೆ ನೀಡಬಹುದು ಎಂದು ತಿಳಿಸಿದ್ದಾರೆ.
ಕೊಲಂಬೊದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವಾಸವಾಗಿರುವ ಅಗತ್ಯ ವಸ್ತುಗಳನ್ನು ತಲುಪಿಸಲು ಅನುಮತಿ ನೀಡಬೇಕೆಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದರು.