ಆಗ್ರಾ, ಮೇ 03(DaijiworldNews/MS): ಅಯೋಧ್ಯೆ ಜಗತ್ ಗುರು ಪರಮಹಂಸ ದಾಸ್ ಅವರನ್ನು ಆಗ್ರಾದಲ್ಲಿ ಪೊಲೀಸರು ಮಂಗಳವಾರ ತಡೆದಿದ್ದಾರೆ. ಅಕ್ಷಯ ತೃತೀಯ ದಿನದಂದು ಮಂತ್ರಗಳೊಂದಿಗೆ ‘ಶುದ್ಧೀಕರಣ’ ಮಾಡಲು ತಾಜ್ ಮಹಲ್ಗೆ ಭೇಟಿ ನೀಡುವುದಾಗಿ ಅವರು ಘೋಷಿಸಿದ್ದರು.
ಈ ಹಿಂದೆ, ಏಪ್ರಿಲ್ 26 ರಂದು 'ಬ್ರಹ್ಮದಂಡ'ದೊಂದಿಗೆ ತಾಜ್ಮಹಲ್ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದಿದ್ದರು. "ತಮ್ಮನ್ನು ತಡೆದ ಪೊಲೀಸರ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಇತರ ಸಮುದಾಯದವರನ್ನು ಒಳಗೆ ಬಿಡುತ್ತಿರುವಾಗ ನನ್ನನ್ನು ಯಾಕೆ ಬಿಡುತ್ತಿಲ್ಲ. ನಾನು ಕೇಸರಿ ಬಟ್ಟೆ ಧರಿಸಿದ್ದರಿಂದ ತಡೆಯಲಾಗಿದೆ.ನನ್ನನ್ನು ಅವಮಾನಿಸಿದ್ದಾರೆ. ಹಾಗಿದ್ದರೆ, ನನ್ನನ್ನು ಆಹ್ವಾನಿಸಿದ್ದು ಏಕೆ?" ಎಂದು ಅವರು ಪ್ರಶ್ನೆ ಮಾಡಿದರು.
ಈ ಮಧ್ಯೆ, ತಾಜ್ ಮಹಲ್ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.