ಶಿವಪುರಿ (ಮಧ್ಯಪ್ರದೇಶ), ಮೇ 03 (DaijiworldNews/DB): ಮದುವೆ ಮೆರವಣಿಗೆಯಲ್ಲಿ ಬಂದೂಕಿನಿಂದ ಹಾರಿಸಿದ ಗುಂಡು ತಗುಲಿ ಇಬ್ಬರು ಮಹಿಳೆಯರು ಮತ್ತು ಬಾಲಕಿಯೋರ್ವಳು ಗಾಯಗೊಂಡ ಘಟನೆ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಗಾಯಾಳುಗಳಾದ ಇಬ್ಬರು ಮಹಿಳೆಯರು ಮತ್ತು ಮೂರು ವರ್ಷದ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಪೊಹ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಮ್ರಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಹಮ್ಮಿಕೊಂಡ ಮೆರವಣಿಗೆ ಸಮಯದಲ್ಲಿ ಮದುವೆ ಸಂಭ್ರಮಕ್ಕಾಗಿ ಗುಂಡು ಹಾರಿಸಲಾಗಿದೆ. ಈ ವೇಳೆ ಅಚಾನಕ್ ಆಗಿ ಗುಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಬಾಲಕಿಗೆ ತಗುಲಿದೆ. ಇದರಿಂದ ಮೂವರೂ ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.