ಚಾಮರಾಜನಗರ, ಮೇ 03(DaijiworldNews/MS): ಸೀಬೆಹಣ್ಣು ಕೀಳಲೆಂದು ಮರಕ್ಕೆ ಹತ್ತಿದ ಅಕ್ಕ-ತಂಗಿ ಇಬ್ಬರೂ ಆಯಾತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಘಟನೆ ಮಂಗಳವಾರ ಸಂಭವಿಸಿದೆ.
ಕೆಬ್ಬೇಪುರ ಗ್ರಾಮದ ರೇಚಣ್ಣ ಮತ್ತು ವೇದಾ ದಂಪತಿಗಳ ಎಂಬುವರ ಮಕ್ಕಳಾದ 8ನೇ ತರಗತಿ ಓದುತ್ತಿದ್ದ ಪೂಜಾ (14) ಮತ್ತು 6ನೇ ತರಗತಿಯ ಪುಣ್ಯ(12) ಮೃತ ದುರ್ದೈವಿಗಳು.
ಇಬ್ಬರು ಮಕ್ಕಳು ಬೆಳಗ್ಗೆ ತಿಂಡಿ ತಿಂದು ನಂತರ ತಮ್ಮದೇ ಜಮೀನಿನಲ್ಲಿ ಬೆಳೆದಿದ್ದ ಸೀಬೆ ಹಣ್ಣು ಕೀಳಲು ಮರದ ಮೇಲೆ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಇಬ್ಬರು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ . ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ