ಬೆಂಗಳೂರು, ಮೇ 03 (DaijiworldNews/DB): ಮುಖ್ಯಮಂತ್ರಿ ಬದಲಾವಣೆ ಮಾಡುವುದು, ಬಿಡುವುದು ಬಿಜೆಪಿಗೆ ಬಿಟ್ಟ ವಿಷಯ. ಅದಕ್ಕೂ, ನಮಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಈದ್-ಉಲ್-ಫಿತರ್ ಪ್ರಾರ್ಥನೆಯ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಬದಲಾವಣೆ ಮಾಡುತ್ತಾರೋ, ಮುಂದುವರಿಸುತ್ತಾರೋ ಗೊತ್ತಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ಎಲ್ಲಾ ಧರ್ಮದವರಿಗೆ ರಕ್ಷಣೆ ಕೊಡುವುದರೊಂದಿಗೆ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದರೆ ಸಾಕು ಎಂದರು.
ರಂಜಾನ್ ಸಂದರ್ಭದಲ್ಲಿ ನಾಡಿನಲ್ಲಿ ಶಾಂತಿ, ಸೌಹಾರ್ದ ನೆಲೆಸಲಿ ಎಂಬುದನ್ನು ನಾನು ಪ್ರಾರ್ಥಿಸುತ್ತೇನೆ. ಎಲ್ಲಾ ಧರ್ಮದವರು ಪರಸ್ಪರ ಅನ್ಯೋನ್ಯದಿಂದ ಬಾಳುವಂತಾಗಬೇಕು. ಕರ್ನಾಟಕದ ಹಿರಿಮೆಯೂ ಅನ್ಯೋನ್ಯತೆಯಲ್ಲಿ ಇದೆ ಎಂದವರು ಇದೇ ವೇಳೆ ತಿಳಿಸಿದರು.