ನವದೆಹಲಿ, ಮೇ 03(DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳದ ಕಠ್ಮಂಡು ನಡೆದ ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋವು ಡಿಸ್ಕೋಥೆಕ್ ಹೊಂದಿದ್ದು, ಅದರ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಮದ್ಯ ಸೇವಿಸುವುದನ್ನು ನೋಡಬಹುದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚೈನೀಸ್ ಅಂಬಾಸಿಡರ್ ಒಬ್ಬರ ಜೊತೆ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕಠ್ಮಂಡುವಿನಲ್ಲಿ ಇರುವ ರಾಹುಲ್ ಗಾಂಧಿ ಒಂದು ದಿನದ ಹಿಂದೆ ಸ್ನೇಹಿತರೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.. ಈ ವಿಡಿಯೋಗೆ ನೆಟ್ಟಿಗರು ಭಾರೀ ಕಮೆಂಟ್ ಮಾಡುತ್ತಿದ್ದಾರೆ. ಇದೀಗ ವೈರಲ್ ವಿಡಿಯೋ, ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಠ್ಮಂಡು ಪೋಸ್ಟ್ನ ವರದಿಯ ಪ್ರಕಾರ, ಸೋಮವಾರ ಮಧ್ಯಾಹ್ನ ರಾಹುಲ್ ಗಾಂಧಿ ನೇಪಾಳದ ರಾಜಧಾನಿಗೆ ಬಂದಿಳಿದಿದ್ದಾರೆ.
ಮ್ಯಾನ್ಮಾರ್ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರು ತಮ್ಮ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿಗೆ ಆಹ್ವಾನವನ್ನು ನೀಡಿದ್ದರು ಎಂದು ದಿನಪತ್ರಿಕೆ ಉಲ್ಲೇಖಿಸಿದೆ. ನೇಪಾಳಿ ಪ್ರಕಟಣೆಯ ಪ್ರಕಾರ, ಉದಾಸ್ ಅವರ ಮಗಳು ಸುಮ್ನಿಮಾ, ಮಾಜಿ ಸಿಎನ್ಎನ್ ವರದಿಗಾರ, ನಿಮಾ ಮಾರ್ಟಿನ್ ಶೆರ್ಪಾ ಅವರನ್ನು ವಿವಾಹವಾಗಲಿದ್ದಾರೆ.