ವಿಜಯಪುರ, ಮೇ 03 (DaijiworldNews/HR): ರಾಜ್ಯದಲ್ಲಿ ಮೇ 10ರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ಹೇಳಿವ ಮೂಲಕ ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ವಿಜಯಪುರ ಪಟ್ಟಣದಲ್ಲಿ ಮಾತನಾಡಿದ ಅವರು, ಮೇ 10ರ ಒಳಗಡೆ ಸಿಎಂ ಬದಲಾವಣೆ ಆಗಬಹುದು. ಪಕ್ಷದ ಹಿತದೃಷ್ಟಿಯಿಂದ ಅಂತಿಮ ತೀರ್ಮಾನವನ್ನು ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ ಎಂದರು.
ಇನ್ನು ಸಿಎಂ ಬದಲಾವಣೆಯಾದ್ರೆ ಒಬ್ಬರಿಗೆ ಜೈಲಿಗೆ ಹೋಗುವ ಭಯವಿದ್ದು, ಇನ್ನೊಬ್ಬರಿಗೆ ಸಿಎಂ ಆಗಲ್ಲ ಎನ್ನುವ ಭಯ ಕಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.