ನವದೆಹಲಿ, ಮೇ 03(DaijiworldNews/MS): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂ. ವಂಚಿಸಿ ಪರಾರಿಯಾಗಿರುವ ಮೆಹೂಲ್ ಚೋಸ್ಕಿ ವಿರುದ್ಧ ಸಿಬಿಐ ಹೊಸ ಕೇಸು ದಾಖಲಿಸಿದೆ. ಶನಿವಾರ ಸಲ್ಲಿಸಿದ ತನ್ನ ಎಫ್ಐಆರ್ ನಲ್ಲಿ ಪ್ರಯೋಗಶಾಲೆಯಲ್ಲಿ ಸಿದ್ಧಪಡಿಸಿದ ನಕಲಿ ವಜ್ರಗಳನ್ನು ಅಸಲಿ ಎಂದು ಬಿಂಬಿಸಿದ್ದು ಮಾತ್ರವಲ್ಲದೆ, ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ 25 ಕೋಟಿ ರೂ. ಸಾಲ ಪಡೆದಿದ್ದರು ಎಂಬ ಹೊಸ ಆರೋಪವನ್ನು ಸಿಬಿಐ ಸೋಮವಾರ ಹೊರಿಸಿದೆ.
ಚೋಕ್ಸಿ ತನ್ನ ದೀರ್ಘಾವಧಿಯ ಕಾರ್ಯನಿರತ ಬಂಡವಾಳದ ಅಗತ್ಯಕ್ಕಾಗಿ ಹಣಕಾಸಿನ ನೆರವು ಕೋರಿ ಐಎಫ್ಸಿಐ (IFCI) ಲಿಮಿಟೆಡ್ ಅನ್ನು ಸಂಪರ್ಕಿಸಿದ್ದು, 2016 ಮಾರ್ಚ್ ತಿಂಗಳಲ್ಲಿ ₹25 ಕೋಟಿ ಕಾರ್ಪೊರೇಟ್ ಸಾಲವನ್ನು ಹಣಕಾಸು ಸಂಸ್ಥೆ ಮಂಜೂರು ಮಾಡಿತ್ತು. ಎಫ್ಐಆರ್ ಪ್ರಕಾರ ಐಎಫ್ಸಿಐ ಲಿಮಿಟೆಡ್ ಜಿಜಿಎಲ್ ಹಾಗೂ ಚೋಕ್ಸಿಯ ಪ್ರಾತಿನಿಧ್ಯ, ಭರವಸೆಗಳು ಮತ್ತು ಸುರಾಜ್ ಮಲ್ ಲಲ್ಲೂ ಭಾಯ್ ಆಂಡ್ ಕಂಪನಿ,ನರೇಂದ್ರ ಝಾರವಿ,ಪ್ರದೀಪ್ ಶಾ ಮತ್ತು ಶ್ರೇಣಿಕ್ ಶಾ ಎಂಬ ಮೌಲ್ಯಮಾಪಕರು ನಡೆಸಿದ ಮೌಲ್ಯಮಾಪನದ ಆಧಾರದ ಸಾಲ ನೀಡಿತ್ತು. ಷೇರುಗಳ ಗಿರವಿ ಮತ್ತು ಚಿನ್ನ, ವಜ್ರ ಮತ್ತು ಚಿನ್ನಾಭರಣಗಳ ಗಿರವಿ ಆಧಾರದ ಮೇಲೆ ಎರಡು ಬಾರಿ ಭದ್ರತಾ ಕವರ್ ಆಧಾರದ ಮೇಲೆ ಸಾಲವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಹೆಸರಿಸಿದ ಆತನ ಕಂಪನಿ ಗೀತಾಂಜಲಿ ಜೆಮ್ಸ್, ಮೌಲ್ಯಮಾಪಕ ಸೂರಜ್ಮಲ್ ಲಾಲೂ ಭಾಯ್ ಮತ್ತು ಮೌಲ್ಯಮಾಪನ ಮಾಡಿದವರು ಸೇರಿದಂತೆ ಮೂವರ ವಿರುದ್ಧವೂ ಕೇಸು ದಾಖಲಾಗಿದೆ.
ವಜ್ರಗಳು ಕಡಿಮೆ ಗುಣಮಟ್ಟದ್ದಾಗಿದ್ದು, ಪ್ರಯೋಗಾಲಯದಲ್ಲಿ ತಯಾರಾದ ರಾಸಾಯನಿಕ ಆವಿ ವಜ್ರಗಳಾಗಿದ್ದು, ಇತರ ಕಳಪೆ ಬಣ್ಣದ ಕಲ್ಲುಗಳು ಮತ್ತು ನಿಜವಾದ ರತ್ನದ ಕಲ್ಲುಗಳಲ್ಲ ಎಂಬುದು ಬೆಳಕಿಗೆ ಬಂದಿದೆ” ಎಂದು ಸಿಬಿಐ ಎಫ್ಐಆರ್ನಲ್ಲಿ ತಿಳಿಸಿದೆ.