ಡೆನ್ಮಾರ್ಕ್ ,ಮೇ 03(DaijiworldNews/MS): ಮೂರು ರಾಷ್ಟ್ರಗಳ ಐರೋಪ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮೇ 3ರ ಮಂಗಳವಾರ ಡೆನ್ಮಾರ್ಕ್ಗೆ ಪ್ರಯಾಣಿಸಲಿದ್ದಾರೆ. ಕೋಪನ್ ಹ್ಯಾಗನ್ ನಲ್ಲಿ, ಅವರು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಉಭಯ ನಾಯಕರು ಡೆನ್ಮಾರ್ಕ್ ಜೊತೆಗಿನ ಭಾರತದ ವಿಶಿಷ್ಟವಾದ‘ಹಸಿರು ಕಾರ್ಯತಂತ್ರ ಪಾಲುದಾರಿಕೆ’ (ಗ್ರೀನ್ ಸ್ಟ್ರಾಟೆಜಿಕ್ ಪಾಲುದಾರಿಕೆ)ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
ಇದಲ್ಲದೆ ಪ್ರಧಾನಮಂತ್ರಿಯವರು ಭಾರತ-ಡೆನ್ಮಾರ್ಕ್ ಬಿಸಿನೆಸ್ ರೌಂಡ್ಟೇಬಲ್ನಲ್ಲಿ ಭಾಗವಹಿಸುವ ಜೊತೆಗೆ ಡೆನ್ಮಾರ್ಕ್ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
ಸೋಮವಾರ ಬೆಳಗ್ಗೆ ಬರ್ಲಿನ್ಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾಗಿದ್ದರು. ಉಭಯ ನಾಯಕರು ಒಟ್ಟಾರೆ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಿದ್ದರು.