ಅಣ್ಣಿಗೇರಿ, ಮೇ 02 (DaijiworldNews/MS): ಆಸ್ತಿಗಾಗಿ ಪುತ್ರನೋರ್ವ ಹೆತ್ತಬ್ಬೆಯನ್ನೇ ಹತ್ಯೆಗೈದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ (65) ಹತ್ಯೆಯಾದ ದುರ್ದೈವಿ, ಬಸವರಾಜ ಕಲ್ಲಪ್ಪ ಅಣ್ಣಿಗೇರಿ ಎಂಬಾತನೇ ತಾಯಿಯನ್ನು ಕೊಲೆ ಮಾಡಿದ ಮಗ.
ಈತ ಆಸ್ತಿ ನೀಡು ಎಂದು ದಿನವೂ ತಾಯಿಗೆ ಕಿರುಕುಳ ಕೊಡುತ್ತಿದ್ದ. ಆದರೆ ತಾಯಿ ಆಸ್ತಿ ಕೊಡಲು ನಿರಾಕರಿಸಿದ್ದಕ್ಕೆ ಇಂದು ಮತ್ತೆ ಇಬ್ಬರ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಸಿಟ್ಟಾದ ಮಗ ತಾಯಿಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, . ಇದೀಗ ಪೊಲೀಸರು ಆರೋಪಿ ಬಸವರಾಜ್ ನನ್ನು ಬಂಧಿಸಿದ್ದಾರೆ.