ಕಲಬುರ್ಗಿ, ಮೇ 02 (DaijiworldNews/MS): ಎಸ್ಐ ಅಕ್ರಮ ನೇಮಕಾತಿಯಲ್ಲಿ ನಡೆದ ಅಕ್ರಮ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ತಮ್ಮ ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಿವ್ಯಾ ಹಾಗರಗಿ ಈಗಾಗಲೇ ಸಿಐಡಿ ವಿಚಾರಣೆ ಎದುರಿಸುತ್ತಿದ್ದು, ದಂಪತಿಗಳಿಬ್ಬರ ಬಂಧನದ ಬಳಿಕ ಮಕ್ಕಳನ್ನು ವಿಜಯಪುರದ ತವರು ಮನೆಯಲ್ಲಿ ಇರಿಸಲಾಗಿತ್ತು. ದಿವ್ಯಾ ಅವರ ಸಹೋದರ ಭಾನುವಾರ ತಾಯಿಯ ಭೇಟಿಗಾಗಿ ಮಕ್ಕಳನ್ನು ಕರೆತಂದಿದ್ದರು.
ಈ ಸಂದರ್ಭದಲ್ಲಿ ತಾಯಿ ದಿವ್ಯಾ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಕ್ಕಳು, ನಿನ್ನಿಂದಲೇ ಎಲ್ಲಾ ಆಗಿದ್ದು, ಅಪ್ಪನೂ ಜೈಲಿಗೆ ಹೋಗುವಂತಾಯಿತು. ಎಲ್ಲವನ್ನೂನಾವು ಟಿ.ವಿ.ಯಲ್ಲಿ ನೋಡಿದ್ದೇವೆ ಎನ್ನುವುದನ್ನು ಕೇಳಿ ಮತ್ತೆ ಕಣ್ಣೀರು ಹಾಕಿದರು.