ನವದೆಹಲಿ, ಮೇ 02 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರನ್ನಾಗಿ ಪೆಟ್ರೋಲಿಯಂ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ತರುಣ್ ಕಪೂರ್ ಅವರನ್ನು ಪ್ರಧಾನಿ ಸಲಹೆಗಾರರನ್ನಾಗಿ ಹಾಗೂ ಹಿರಿಯ ಅಧಿಕಾರಿಗಳಾದ ಹರಿ ರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನ ಪ್ರಧಾನ ಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗಿದೆ ಎಂದಿದೆ.
ಕಪೂರ್ ಹಿಮಾಚಲ ಪ್ರದೇಶ ಕೇಡರ್ನ 1987ರ ಬ್ಯಾಚ್ನ ಐಎಎಸ್ ಅಧಿಕಾರಿ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಅವರು 2021ರಲ್ಲಿ ನಿವೃತ್ತರಾದರು. ಹರಿರಂಜನ್ ರಾವ್ ಅವರು ಮಧ್ಯಪ್ರದೇಶ ಕೇಡರ್ನ 1994ರ ಬ್ಯಾಚ್ನ ಎಲ್ಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ದೂರಸಂಪರ್ಕ ಇಲಾಖೆಯಲ್ಲಿ ಯೂನಿವರ್ಸಲ್ ಸರ್ವೀಸಸ್ ಆಬ್ಲಿಗೇಷನ್ ಫಂಡ್ನಲ್ಲಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.