ಉತ್ತರ ಪ್ರದೇಶ, ಮೇ 02 (DaijiworldNews/DB): ಬಾಲಿವುಡ್ ನಟಿ ಕಂಗನಾ ರಾಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾನುವಾರ ಭೇಟಿಯಾಗಿದ್ದಾರೆ.
ಯೋಗಿ ಆದಿತ್ಯನಾಥ್ ಭೇಟಿ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ, ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಭೇಟಿ ಖುಷಿ ತಂದಿದೆ. ಅವರ ಭೇಟಿಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದಿದ್ದಾರೆ.
ಅವರ ಸಹಾನುಭೂತಿ, ಕಾಳಜಿ ಅದ್ಭುತವಾದದ್ದು. ಅವರ ಈ ಗುಣಗಳೇ ಅವರ ಮೇಲಿನ ಗೌರವ ಹೆಚ್ಚಾಗಲು ಕಾರಣ. ಅವರಿಂದ ನಾನು ಸ್ಪೂರ್ತಿಗೊಂಡಿದ್ದೇನೆ ಎಂದವರು ಬರೆದುಕೊಂಡಿದ್ದಾರೆ.