ನವದೆಹಲಿ, ಮೇ 02 (DaijiworldNews/DB): ಉತ್ತರ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಅನಧಿಕೃತ ಧ್ವನಿವರ್ಧಕ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 53,942 ಅನಧಿಕೃತ ಧ್ವನಿವರ್ದಕಗಳನ್ನು ತೆರವುಗೊಳಿಸಲಾಗಿದೆ.
ತೆರವು ಕಾರ್ಯಾಚರಣೆಯು ಏ. 25ರಿಂದ ನಡೆಯುತ್ತಿದೆ. ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ತಾರತಮ್ಯ ಮಾಡದೆ ತೆರವು ಕಾರ್ಯ ಮಾಡಲಾಗಿದೆ. ಸರ್ಕಾರದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ 60,000 ಧ್ವನಿವರ್ಧಕಗಳಿಗೆ ತಜ್ಞರು ವಿಧಿಸಿರುವ ಶಬ್ದಮಿತಿಗೆ ಸೀಮಿತಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಪಾಟ್ನಾದಲ್ಲಿ ಸುಮಾರು 50 ಮೀಟರ್ಗಳಷ್ಟು ಅಂತರದಲ್ಲಿರುವ ದೇವಸ್ಥಾನ ಹಾಗೂ ಮಸೀದಿಯಲ್ಲಿ ಪರಸ್ಪರ ಸೌಹಾರ್ದಕ್ಕೆ ಬೆಲೆ ಕೊಡುವ ಕೆಲಸ ನಡೆಯುತ್ತಿದೆ. ಮಸೀದಿಯಲ್ಲಿ ಆಜಾನ್ ಆರಂಭವಾದಾಗ ದೇವಳದ ಧ್ವನಿವರ್ದಕ ನಿಲ್ಲಿಸಲಾಗುತ್ತದೆ. ದೇವಳದ ಧ್ವನಿವರ್ದಕಗಳಲ್ಲಿ ಪ್ರಾರ್ಥನೆ ಕೇಳುವಾಗ ಮಸೀದಿ ಧ್ವನಿವರ್ಧಕ ನಿಲ್ಲಿಸಲಾಗುತ್ತದೆ.