ಶ್ರೀನಗರ, ಮೇ 01 (DaijiworldNews/HR): ಲಷ್ಕರ್-ಎ-ತೈಬಾ (ಎಲ್ಇಟಿ) ಸಂಘಟನೆಯ 'ಹೈಬ್ರಿಡ್' ಭಯೋತ್ಪಾದಕನನ್ನು ಭಾರತೀಯ ಸೇನೆಯು ಕುಲ್ಗಾಮ್ ಪೊಲೀಸರೊಂದಿಗೆ ಕಾಶ್ಮೀರದಿಂದ ಬಂಧಿಸಿದೆ.
ಬಂಧಿತ ಉಗ್ರನನ್ನು ಕುಲ್ಗಾಮ್ನ ಗಡಿಹಾಮಾ ನಿವಾಸಿ ಯಾಮಿನ್ ಯೂಸಫ್ ಭಟ್ ಎಂದು ಗುರುತಿಸಲಾಗಿದೆ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಂಧಿತ ಎಲ್ಇಟಿ ಭಯೋತ್ಪಾದಕ ಪಾಕಿಸ್ತಾನ ಮೂಲದ ಭಯೋತ್ಪಾದಕರು ಮತ್ತು ಸ್ಥಳೀಯ ಎಲ್ಇಟಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದನು ಮತ್ತು ಭಯೋತ್ಪಾದಕ ಘಟನೆಗಳನ್ನು ಕಾರ್ಯಗತಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದನು ಎನ್ನಲಾಗಿದೆ.
ಇನ್ನು ಬಂಧಿತನಿಂದ ಪಿಸ್ತೂಲ್, ಒಂದು ಮ್ಯಾಗಜೀನ್, ಎರಡು ಹ್ಯಾಂಡ್ ಗ್ರೆನೇಡ್ಗಳು ಮತ್ತು 51 (9 ಎಂಎಂ) ಪಿಸ್ತೂಲ್ ಸುತ್ತುಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕನ ವಿರುದ್ಧ ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.