ಕಲಬುರಗಿ, ಮೇ 01 (DaijiworldNews/HR): 545 ಪಿಎಸ್ಐ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಮಂಗಳೂರಿಗೆ ಹೋಗಿದ್ದೆ, ಆರೋಗ್ಯ ಸರಿ ಇರಲಿಲ್ಲ. ಇವತ್ತು ಕಲಬುರ್ಗಿಗೆ ಬಂದಿದ್ದೇನೆ ಎಂದು ಹೇಳಿರುವ ಮಂಜುನಾಥ ಕಲಬುರಗಿಯ ಐವಾನ್ ಐ ಶಾಹಿ ಗೆಸ್ಟ್ ಹೌಸ್ ನಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಇನ್ನು ಮಂಜುನಾಥ ಮೇಳಕುಂದಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪಿಯಾಗಿದ್ದು, ಈತನ ಬಂಧನಕ್ಕೆ ಸಿಐಡಿ ಪೊಲೀಸರು ಬಲೆ ಬೀಸಿದ್ದರು.
ಸುಮಾರು ದಿನಗಳಿಂದ ತಲೆಮರೆಸಿಕೊಂಡಿದ ಆರೋಪಿ ಇದೀಗ ಆಟೋದಲ್ಲಿ ಬ್ಯಾಗ್ ಸಮೇತ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ ಎನ್ನಲಾಗಿದೆ.