ಕೊಚ್ಚಿ, ಮೇ 01 (DaijiworldNews/DB): ವಾಂತಿ ಮಾಡುವ ವೇಳೆ ಶ್ವಾಸಕೋಶದಲ್ಲಿ ಆಹಾರ ಸಿಲುಕಿ 9 ವರ್ಷದ ಬಾಲಕ ಮೃತಪಟ್ಟ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ.
ಮೃತ ಬಾಲಕನನ್ನು ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ದಂಪತಿಯ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಈತ ಪರೋಟ ಸೇವಿಸಿದ್ದ. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಆತ ನಿರಂತರವಾಗಿ ವಾಂತಿ ಮಾಡುತ್ತಿದ್ದ. ಅಲ್ಲದೆ ಆತನ ಹೊಟ್ಟ ಊದಿಕೊಂಡಿದ್ದ ಹಿನ್ನೆಲೆಯಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಆದರೆ ವಾಂತಿ ಮಾಡುವುದು ನಿಂತಿರಲಿಲ್ಲ.
ಈತ . ಶುಕ್ರವಾರ ಪರೋಟ ತಿಂದಿದ್ದ ಸಂತೋಷ್ ಅನಾರೋಗ್ಯದಿಂದ ಬಳಲುತ್ತಿದ್ದ. ಹೆಚ್ಚು ವಾಂತಿ ಮಾಡಿಕೊಳ್ಳುತ್ತಿದ್ದ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಬಳಿಕ ಹೊಟ್ಟೆ ನೋವು ಕಡಿಮೆಯಾಗಿತ್ತಾದರೂ ವಾಂತಿ ಮಾಡುವುದು ಮಾತ್ರ ನಿಲ್ಲಲಿಲ್ಲ. ಆದರೆ ಬೆಳಗ್ಗೆ 10.30ರ ಸುಮಾರಿಗೆ ರಕ್ತದೊತ್ತಡ ತೀವ್ರ ಕುಸಿತಗೊಂಡು ಬಾಲಕ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಶ್ವಾಸಕೋಸದಲ್ಲಿ ಆಹಾರ ಸಿಲುಕಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಬಾಲಕ ಸಂತೋಷ್ ದೀರ್ಘ ಸಮಯದಿಂದ ಮೂರ್ಛೆ ರೋಗದ ಸಮಸ್ಯೆ ಹೊಂದಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.