ಬೆಂಗಳೂರು, ಏ 30 (DaijiworldNews/MS): ಮುಸ್ಲಿಂರ ಖುತುಬ್-ಎ-ರಂಜಾನ್ ಹಬ್ಬವನ್ನು ಮಂಗಳವಾರದ ಬದಲು ಸೋಮವಾರವೇ ಅಂದರೆ ಮೇ 2ರಂದು ಆಚರಿಸುವುದಕ್ಕೆ ಮೂನ್ ಕಮಿಟಿಯು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ರಂಜಾನ್ ರಜೆ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರವು ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ, ಮೇ 2, 2022ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಮೂನ್ ಕಮಿಟಿ ಈ ಬಗ್ಗೆ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರದಿಂದ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ಈ ಮೊದಲು ಮೇ 3 ರಂದು ರಂಜಾನ್ ಹಬ್ಬದ ರಜೆ ಘೋಷಣೆ ಮಾಡಲಾಗಿತ್ತು. ಮೇ 2 ರಂದು ಹಬ್ಬ ಆಚರಣೆ ಮಾಡಲಿರುವ ಹಿನ್ನಲೆಯಲ್ಲಿ ಅಂದೇ ರಜೆ ನೀಡಲಾಗಿದೆ.