ಋಷಿಕೇಶ, ಏ 30 (DaijiworldNews/DB): ರಿವರ್ ರಾಫ್ಟಿಂಗ್ ವೇಳೆ ಬಾಲಕಿಯರಿಬ್ಬರು ನೀರಿಗೆ ಬಿದ್ದ ಘಟನೆ ಋಷಿಕೇಶದಲ್ಲಿ ನಡೆದಿದ್ದು, ಸದ್ಯ ಯುವತಿಯನ್ನು ಭಾರತೀಯ ಸೈನಿಕರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಬಿಸಿಲಿನ ದಣಿವನ್ನು ತಪ್ಪಿಸಿಕೊಳ್ಳಲು ಮತ್ತು ಬೇಸಗೆ ರಜೆಯನ್ನು ಕಳೆಯಲು ನೀರಿರುವ ಕಡೆಗೆ ಪ್ರವಾಸ ಬರುವುದು ಸಾಮಾನ್ಯ. ಹೀಗೆ ಪ್ರವಾಸ ಬಂದು ಬಾಲಕಿಯರು ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಮಾಡುತ್ತಿದ್ದಾಗ ನೀರಿಗೆ ಬಿದ್ದಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ತತ್ಕ್ಷಣ ಭಾರತೀಯ ಸೇನೆಯ ಸೈನಿಕರು ಯುವತಿಯರನ್ನು ರಕ್ಷಿಸಿದ್ದಾರೆ.
ಇವರಿಬ್ಬರೂ ಹೆಚ್ಚು ಪ್ರವಾಹ ಇರುವೆಡೆ ರಾಫ್ಟಿಂಗ್ ಆರಂಭಿಸಿದ್ದರು. ನೀರಿನ ಪ್ರವಾಹಕ್ಕೆ ತೆಪ್ಪ ಮಗುಚಿದ ಕಾರಣ ಘಟನೆ ಸಂಭವಿಸಿದೆ. ಇಬ್ಬರೂ ಕೈ ಕಾಲು ಬಡಿದು ಈಜಲು ಪ್ರಯತ್ನಿಸಿದರಾದರೂ ದಡ ಸೇರಲಾಗಲಿಲ್ಲ. ಈ ವೇಲೆ ಸೈನಿಕರು ಸಹಾಯಕ್ಕೆ ಬಂದಿದ್ದಾರೆ.