ಚೆನ್ನೈ, ಏ 30 (DaijiworldNews/MS): ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಬ್ಯಾಟರಿ ಸಂಬಂಧಿತ ಸಮಸ್ಯೆಗಳಿಂದಾಗಿ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹಿಂಪಡೆದ ನಂತರ ಒಕಿನಾವಾದಲ್ಲಿ ಅಗ್ನಿ ಅವಘಡ ಸಂಭವಿಸಿದ ಮೊದಲ ಘಟನೆಯಾಗಿದೆ.
ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ನಿವಾಸಿ ಸತೀಶ್ ಅವರು ಕಳೆದ ವರ್ಷ ಒಕಿನಾವಾ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸಿದ್ದು, ಎಂದಿನಂತೆ ಶನಿವಾರ ಮುಂಜಾನೆ ಸತೀಶ್ ತಮ್ಮ ಕಚೇರಿಯ ಸಮೀಪ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ. ಆಗಲೇ ಸೀಟ್ ಕೆಳಗೆ ಹೊಗೆ ಹೊರಹೊಮ್ಮುವುದನ್ನು ಗಮನಿಸಿದ್ದಾರೆ. ಅವರು ಸೀಟ್ ಅನ್ನು ಎತ್ತಿದ ಸ್ವಲ್ಪ ಸಮಯದಲ್ಲೇ ಬೆಂಕಿ ಆವರಿಸಿಕೊಂಡು ಅವರ ಸ್ಕೂಟರ್ ಸುಟ್ಟುಹೋಗಿದೆ.
ಸ್ಥಳೀಯರ ನೆರವಿನಿಂದ ಸತೀಶ್ ಬೆಂಕಿ ನಂದಿಸಿದ್ದು, ಸ್ಕೂಟರ್ ಸಂಪೂರ್ಣ ಸುಟ್ಟುಹೋಗಿವೆ.. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳುಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲವು ದಿನಗಳ ಹಿಂದೆ ಓಕಿನಾವಾ ಬ್ಯಾಟರಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು 3,215 ಪ್ರೈಸ್ ಪ್ರೊ ಸ್ಕೂಟರ್ಗಳನ್ನು ಹಿಂಪಡೆದಿದೆ.