ಹೊಸದಿಲ್ಲಿ, ಏ 30 (DaijiworldNews/HR): ದೇಶದಲ್ಲಿ ಯಾವುದೇ ತೃತೀಯ ಅಥವಾ ನಾಲ್ಕನೇ ರಂಗವು ಚುನಾವಣೆ ಗೆಲ್ಲುತ್ತದೆ ಎಂದು ನಂಬುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಯಾವುದೇ ಪಕ್ಷವು ಬಯಸಿದರೆ, ಅದು ಎರಡನೇ ರಂಗವಾಗಿಯೇ ಹೊರಹೊಮ್ಮಬೇಕು ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ದೇಶದಲ್ಲಿ ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ಎಂದಿಗೂ ನಂಬಲಿಲ್ಲ. ನಾವು ಬಿಜೆಪಿಯನ್ನು ಮೊದಲ ರಂಗವೆಂದು ಪರಿಗಣಿಸಿದರೆ, ಅದನ್ನು ಸೋಲಿಸ ಬಯಸುವ ಪಕ್ಷ ಎರಡನೇ ರಂಗವಾಗಿರಬೇಕು ಎಂದರು.
ಇನ್ನು 2024ರ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಗೆ ಮೂರನೇ ರಂಗವಾಗಿ ಹೊರಹೊಮ್ಮಲು ನೀವು ಸಹಾಯ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದಾರೆ.