ಮೈಸೂರು, ಏ 30 (DaijiworldNews/MS): ಮದ್ಯಪಾನದ ವ್ಯಸನವಿದ್ದ ಯುವಕನೋರ್ವ ಕುಡಿತಕ್ಕೆ ಹಣ ನೀಡಲಿಲ್ಲ ಎಂದು ಒಡಹುಟ್ಟಿದ ತಂಗಿಯ ಮಗುವನ್ನೆ ಹತ್ಯೆಗೈದ ಅಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಮೈಸೂರಿನ ಕನಕಗಿರಿಯ ರಾಜು (30) ಎಂದು ಗುರುತಿಸಲಾಗಿದೆ. ಈತನ ತಂಗಿ ರಮ್ಯಾ ಬಾಣಂತನಕ್ಕಾಗಿ ತವರು ಮನೆಯಲ್ಲಿ ಬಂದಿದ್ದಳು. ಈ ವೇಳೆ ಹಣ ಕೊಡುವಂತೆ ಮನೆಯಲ್ಲಿ ಕಿರಿಕ್ ತೆಗೆದಿದ್ದಾನೆ. ತಾಯಿ ಇಲ್ಲದ ಸಮಯ ಅಣ್ಣನ ಗಲಾಟೆ ಕಂಡು ಮಲಗಿದ್ದ ಮಗುವನ್ನು ಕೊಠಡಿಯಲ್ಲೇ ಬಿಟ್ಟು, ಹೆದರಿ ರಮ್ಯಾ ಪಕ್ಕದ ಮನೆಗೆ ಓಡಿದ್ದಾಳೆ. ಈ ವೇಳೆ ಮಲಗಿದ್ದ 8 ತಿಂಗಳ ಮಗುವನ್ನು ಎತ್ತಿ ಗೋಡೆಗೆ ಅಪ್ಪಳಿಸಿದ್ದಾನೆ.
ಗೋಡೆಗೆ ಅಪ್ಪಳಿಸಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ಬಳಿಕ ಆರೋಪಿ ರಾಜು ಪರಾರಿಯಾಗಿದ್ದಾನೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.