ಬೆಂಗಳೂರು, ಏ 30 (DaijiworldNews/HR): ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ, ಪಿಎಫ್ಐ ಷಡ್ಯಂತ್ರವಿದೆ. ಸಮಾಜದ ಶಾಂತಿ ಕೆಡಿಸುತ್ತಿರುವ ವಿಎಚ್ಪಿ ಭಜರಂಗದಳ, ಎಸ್ಡಿಪಿಐ ಅಂತಹ ಯಾವುದೇ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ, ಪಿಎಫ್ಐ ಷಡ್ಯಂತ್ರವಿದೆ. ಸಮಾಜದ ಶಾಂತಿ ಕೆಡಿಸುತ್ತಿರುವ ವಿಎಚ್ಪಿ ಭಜರಂಗದಳ, ಎಸ್ಡಿಪಿಐ ಅಂತಹ ಯಾವುದೇ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಹುಬ್ಬಳ್ಳಿಯಲ್ಲಿ ಯಾರೇ ಆಹಾರ ಕಿಟ್ ವಿತರಿಸಿದ್ದರೂ ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಕಾಂಗ್ರೆಸ್ಗೂ ಸಂಬಂಧವಿಲ್ಲ.ಕಾಂಗ್ರೆಸ್ ಪಕ್ಷ ಸಂವಿಧಾನ, ಕಾನೂನಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇನ್ನು ಹುಬ್ಬಳ್ಳಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗಾಗಲೇ ಗಲಭೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸುತ್ತಿರುವಂತ ಪೊಲೀಸರು, ಗಲಭೆ ಕಿಂಗ್ ಪಿನ್ ವಸೀಂ ಅನ್ನು ಬಂಧಿಸಿದ್ದಾರೆ.