ನವದೆಹಲಿ, ಏ 30 (DaijiworldNews/HR): 200 ಮಂದಿ ಉಗ್ರರನ್ನು ಎದುರಿಸಲಾಗದಿದ್ದರೆ ಹತ್ತು ಲಕ್ಷ ಭಾರತೀಯ ಸೇನಾ ಪಡೆಗಳು ಏನು ಮಾಡುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.
ಭದ್ರತಾ ಪಡೆಗಳ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ನಿರಂತರವಾಗಿ ದಾಳಿ ಮಾಡಲು ಪ್ರಯತ್ನಿಸುತ್ತಿದ್ದು, ನಮ್ಮ ಹತ್ತು ಲಕ್ಷ ಸೇನೆಯು ಇಲ್ಲಿ ಏನು ಮಾಡುತ್ತಿದೆ? ಸೇನೆ ಕೇವಲ 100-150 ಭಯೋತ್ಪಾದಕರು ಮಾತ್ರ ಸಕ್ರಿಯರಾಗಿದ್ದಾರೆ ಎಂದು ಹೇಳುತ್ತಾರೆ, ಅವರನ್ನು ಎದುರಿಸಲು ಸಾಧ್ಯವಾಗದಿದ್ದರೆ, ಇವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಪಾಕಿಸ್ತಾನವನ್ನು ಹೆಸರಿಸದೆ, ಮತ್ತೊಮ್ಮೆ ಮಾತುಕತೆ ವಿಚಾರವೆತ್ತಿದ ಮೆಹಬೂಬಾ, ನೀವು ಇಲ್ಲಿಗೆ ಎಷ್ಟು ಸೈನ್ಯವನ್ನು ಕರೆತಂದರೂ ಮತ್ತು ಎಷ್ಟು ಜನರನ್ನು ಜೈಲಿಗೆ ಹಾಕಿದರೂ, ಕೊನೆಯಲ್ಲಿ, ನೀವು ಮಾತುಕತೆ ನಡೆಸಲೇಬೇಕು ಎಂದು ಹೇಳಿದ್ದಾರೆ.