ಕಲಬುರಗಿ, ಏ 29 (DaijiworldNews/HR): ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳನ್ನು 11 ದಿನ ಸಿಐಡಿ ಕಸ್ಟಡಿಗೆ ವಹಿಸಲಾಗಿದೆ.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ, ಅರ್ಚನಾ, ಸುನಿತಾ, ಸುರೇಶ್ ಕಾಟೆಗಾಂವ್, ಕಾಳಿದಾಸ, ಸದ್ದಾಮ್, ಜ್ಯೋತಿ ಪಾಟೀಲ್ ಅವರಿಗೆ 11 ದಿನ ಸಿಐಡಿ ಕಸ್ಟಡಿಗೆ ವಹಿಸಲಾಗಿದ್ದು, ಕಲಬುರ್ಗಿ ಮೂರನೇ ಜೆಎಂಎಫ್ಸಿ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.
ಇನ್ನು ಕಲಬುರ್ಗಿ ಬಿಜೆಪಿ ನಾಯಕರಿಗೆ ದಿವ್ಯಾ ಹಾಗರಗಿಯವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅನ್ನು ಬಂಧಿಸಿದ್ದು, ಶುಕ್ರವಾರ 10 ಗಂಟೆ ಸುಮಾರಿಗೆ ಪುಣೆಯಿಂದ ಕಲಬುರಗಿಗೆ ಅವರನ್ನು ಕರೆದುಕೊಂಡು ಬರಲಾಗುವುದು ಎಂದು ಸಿಐಡಿ ಪೊಲೀಸ್ ಮೂಲಗಳು ತಿಳಿಸಿವೆ.