ನವದೆಹಲಿ, ಏ 29 (DaijiworldNews/MS): ಮಹಿಳಾ ಪೇದೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂನ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಟ್ವೀಟ್ಗಳ ಪ್ರಕರಣದಲ್ಲಿ ಅಸ್ಸಾಂನ ಮತ್ತೊಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಲಿಕ ಮೇವಾನಿ ಅವರನ್ನು ಏಪ್ರಿಲ್ 25 ರಂದು ಆಪಾದಿತ ಹಲ್ಲೆ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿತ್ತು.
ಅಸ್ಸಾಂನ ಕೊಕ್ರಜಾರ್ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅವರ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಕಳೆದ ಗುರುವಾರ ಗುಜರಾತ್ನ ಪಾಲನ್ಪುರದಿಂದಮೇವಾನಿ ಅವರನ್ನು ಮೊದಲ ಬಾರಿಗೆ ಬಂಧಿಸಿತು.
ಜಾಮೀನು ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಜಿಗ್ನೇಶ್ ಮೇವಾನಿ , "ಇದು ಬಿಜೆಪಿ ಮತ್ತು ಆರ್ಎಸ್ಎಸ್ನ ಷಡ್ಯಂತ್ರ. ಅವರು ನನ್ನ ಇಮೇಜ್ಗೆ ಧಕ್ಕೆ ತರಲು ಇದನ್ನು ಮಾಡಿದ್ದಾರೆ. ಅವರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಈ ಮೊದಲು ರೋಹಿತ್ ವೇಮುಲಾರನ್ನು ಬಲಿಪಶುವನ್ನಾಗಿಸಿದ್ದರು. ಈಗ ಅವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ " ಎಂದು ಆರೋಪಿಸಿದ್ದಾರೆ.