ಪಾಟ್ನಾ, ಏ 29 (DaijiworldNews/DB): ದೂರು ದಾಖಲಿಸಲು ಠಾಣೆಗೆ ಆಗಮಿಸಿದ್ದ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಆರೋಪದಡಿ ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಮಾನತಾಗಿದ್ದಾರೆ.
ಇಲ್ಲಿನ ಸಹರ್ಸಾ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿ ಶಶಿಕುಮಾರ್ ಸಿನ್ಹಾ ಅಮಾನತಾದ ಪೊಲೀಸ್ ಅಧಿಕಾರಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅಮಾತನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಅಧಿಕಾರಿಯು ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಶರ್ಟ್ ಬಿಚ್ಚಿ ಮಸಾಜ್ ಮಾಡಿಕೊಳ್ಳುವ ದೃಶ್ಯ ವೀಡಿಯೋದಲ್ಲಿತ್ತು. ಠಾಣೆಯ ಹೊರಭಾಗದಲ್ಲಿರುವ ವಸತಿಗೃಹದಲ್ಲಿ ಈ ವೀಡಿಯೋ ಮಾಡಲಾಗಿತ್ತು. ವೀಡಿಯೋ ವೈರಲ್ ಆದ ಬೆನ್ನಲ್ಲೇ ಅಮಾನತು ಆದೇಶ ಹೊರ ಬಿದ್ದಿದೆ.