ನವದೆಹಲಿ, ಏ 29 (DaijiworldNews/HR): ಕೇಂದ್ರ ಸರ್ಕಾರವು ಐಎಎಸ್ ಅಧಿಕಾರಿ ಶಾ ಫೈಸಲ್ ಅವರ ರಾಜೀನಾಮೆ ಪತ್ರವನ್ನು ವಾಪಾಸು ಪಡೆಯುವ ಅರ್ಜಿಯನ್ನು ಸ್ವೀಕರಿಸಿದ್ದು, ಅವರನ್ನು ಸೇವೆಗೆ ಮರು ನೇಮಕ ಮಾಡಿಕೊಂಡಿದೆ.
2019ರಲ್ಲಿ ಫೈಸಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಎಂಬ ಪಕ್ಷ ಹುಟ್ಟುಹಾಕಿದ್ದರು.
ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಬಳಿಕ ಅವರನ್ನು ಸಾರ್ವಜನಿಕ ಸುರಕಾ ಕಾಯ್ದೆಯಡಿ ಬಂಧಿಸಲಾಗಿದ್ದು, ಅವರ ಬಿಡುಗಡೆ ಬಳಿಕ ಫೈಸಲ್ ರಾಜಕೀಯವನ್ನು ತೊರೆದು ಸಾರ್ವಜನಿಕ ಸೇವೆಗೆ ಮರಳುವುದಾಗಿ ಹೇಳಿದ್ದರು. ಆದರೆ ಫೈಸಲ್ ಅವರ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಿರಲಿಲ್ಲ.