ಬೆಂಗಳೂರು, ಏ 29 (DaijiworldNews/MS): ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ರನ್ನು ವಂಚನೆ ಆರೋಪದಡಿಯಲ್ಲಿ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಅರವಿಂದ್ ಕೌಶಿಕ್ ಅವರು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಿರ್ದೇಶನ ಮಾಡಿದ್ದು ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಹಾಗೂ ಶಾರ್ದೂಲ ಹೆಸರಿನಿ ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೂಡಿಬಂದ ಕಮಲಿ ಧಾರವಾಹಿಯನ್ನು ಕೂಡ ನಿರ್ದೇಶನ ಮಾಡಿದ್ದಾರೆ.
ಕಮಲಿ ಧಾರವಾಹಿ ನಿರ್ಮಿಸಲೆಂದು 2018 ರಲ್ಲಿ ನಿರ್ಮಾಪಕ ರೋಹಿತ್ ಎಂಬವರು 73 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು ಆದರೆ ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ, ಲಾಭಾಂಶವನ್ನೂ ನೀಡದೇ ವಂಚನೆ ಮಾಡಳಾಗಿದೆ. ಈ ಕುರಿತು ಕೌಶಿಕ್ ವಿರುದ್ಧ ರೋಹಿತ್ ಆರೋಪ ಮಾಡಿದ್ದಾರೆ.
ಈ ಸಂಬಂಧ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾರೆ. ಅರವಿಂದ್ ಕೌಶಿಕ್ ವಿರುದ್ಧ 420 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಸದ್ಯ ವೈಯ್ಯಾಲಿಕಾವಲ್ ಪೊಲೀಸರು ಅರವಿಂದ್ ಕೌಶಿಕ್ರನ್ನು ಬಂಧಿಸಿದ್ದಾರೆ.