ನವದೆಹಲಿ, ಏ 28 (DaijiworldNews/DB): ಉಡುಪು ಖರೀದಿಸುವಾಗ ಹಣದೊಂದಿಗೆ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಕೇಳುವುದು ಗ್ರಾಹಕರ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಪಾದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೆಹಲಿ-ಎನ್ಸಿಆರ್ನ ಅನ್ಸಾಲ್ ಪ್ಲಾಜಾದಲ್ಲಿರುವ ಕ್ರೀಡಾ ಪರಿಕರಗಳ ಮಾರಾಟ ಮಳಿಗೆ ಡೆಕಾಥ್ಲಾನ್ಗೆ ಭೇಟಿ ನೀಡಿ ನನ್ನ ತಂದೆಗೆ ಒಂದು ಜೊತೆ ಷರಾಯಿ (ಪ್ಯಾಂಟ್) ಖರೀದಿ ಮಾಡಿದೆ. ಖರೀದಿಸಿದ್ದಕ್ಕೆ ಹಣ ನೀಡಿದಾಗ ಬಿಲ್ ಮಾಡುವ ಸಿಬಂದಿ ಹಣದೊಂದಿಗೆ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನೂ ಕೇಳಿದರು. ಆದರೆ ನಾನು ಕೊಡಲು ನಿರಾಕರಿಸಿದೆ ಎಂದಿದ್ದಾರೆ.
ಖರೀದಿಸಿದ ವಸ್ತುವಿನ ಬಿಲ್ ಮಾಡುವಾಗ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಕೇಳುವುದು ಸರಿಯಲ್ಲ. ಇದು ಗ್ರಾಹಕರ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು 'ಡೆಕಾಥ್ಲಾನ್ ಇಂಡಿಯಾ' ಸಂಸ್ಥೆಯನ್ನು ಟ್ಯಾಗ್ ಮಾಡಿ ಅವರು ಟ್ವೀಟಿಸಿದ್ದಾರೆ.