ಬೆಂಗಳೂರು, ಏ 28 (DaijiworldNews/DB): ದಿವ್ಯಾ ಹಾಗರಗಿ ಗೌರವಯುತವಾಗಿ ಪೊಲೀಸರಿಗೆ ಶರಣಾಗಬೇಕು. ಇಲ್ಲವಾದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮೂರು ವಾರಗಳಿಂದ ನಾಪತ್ತೆಯಾಗಿದ್ದಾರೆ. ಮೊಬೈಲ್ ಕೂಡಾ ಸ್ವಿಚ್ ಆಫ್ ಮಾಡಿದ್ದು, ಪೊಲೀಸರಿಗೆ ಆಕೆಯ ಬಗ್ಗೆ ಯಾವುದೇ ಸುಳಿವು ಲಭಿಸುತ್ತಿಲ್ಲ. ಹೀಗಾಗಿ ಅವರು ಬಂದು ಪೊಲೀಸರಿಗೆ ಶರಣಾಗದೇ ಇದ್ದಲ್ಲಿ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುವುದು ಎಂದರು.
ಈಗಾಗಲೇ ದಿವ್ಯಾ ಹಾಗರಗಿಗೆ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. ಶೀಘ್ರ ಅವರನ್ನು ಬಂಧಿಸಲಾಗುವುದು. ಅದಕ್ಕೂ ಮೊದಲು ಆಕೆ ಬಂದು ಶರಣಾದರೆ ಉತ್ತಮ ಎಂದು ತಿಳಿಸಿದರು.