ಬೆಂಗಳೂರು, ಏ 28 (DaijiworldNews/DB): ಭಾಷೆಯ ವಿಚಾರದಲ್ಲಿ ಸುದೀಪ್ ಮಾತು ಸರಿಯಾಗಿದ್ದು, ಅದನ್ನು ನಾವೆಲ್ಲರೂ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಷ್ಟ್ರಭಾಷೆ ವಿಚಾರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ನಡುವೆ ನಡೆದ ಟ್ವೀಟರ್ ವಾರ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ರಾಜ್ಯಗಳು ರಚನೆಯಾಗಿರುವುದು ಭಾಷಾ ಆಧಾರಿತವಾಗಿಯೇ. ಪ್ರಾದೇಶಿಕ ಭಾಷೆಗಳಿಗೆ ಎಲ್ಲಾ ಕಡೆಯೂ ಆದ್ಯತೆ ನೀಡಲಾಗಿದೆ. ಸುದೀಪ್ ಮಾತು ಸರಿಯಾಗಿಯೇ ಇದೆ ಮತ್ತು ನಾವೆಲ್ಲರೂ ಅವರ ಮಾತನ್ನು ಗೌರವಿಸಬೇಕು ಎಂದಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ ಎನ್ನುವ ವಿಚಾರದಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವೆ ಬುಧವಾರ ಟ್ವೀಟ್ ವಾರ್ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದ ಸುದೀಪ್ ಬೆಂಬಲಕ್ಕೆ ಕರ್ನಾಟಕದ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಬರಹಗಾರರು ನಿಂತಿದ್ದರು.