ನವದೆಹಲಿ, ಏ 28 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಒಕ್ಕೂಟ ವ್ಯವಸ್ಥೆಯು ದಬ್ಬಾಳಿಕೆ ಮಾಡುವ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲಾ ತೈಲ ತೆರಿಗೆಗಳಲ್ಲಿ ಶೇ. 68 ರಷ್ಟನ್ನು ಕೇಂದ್ರ ಸರ್ಕಾರ ರಾಜ್ಯಗಳಿಂದ ತೆಗೆದುಕೊಳ್ಳುತ್ತಿದೆ. ಆದಾಗ್ಯೂ ತೈಲ ಬೆಲೆ ಹೆಚ್ಚಳಕ್ಕೆ ರಾಜ್ಯಗಳನ್ನು ದೂರುತ್ತಿರುವುದು ಸೋಜಿಗ ತರಿಸಿದೆ. ಅದೂ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನೇ ಪರಿಗಣಿಸಿ ಡೀಸೆಲ್, ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡುವಂತೆ ಹೇಳಿರುವುದು ಒಂದು ರೀತಿಯ ದಬ್ಬಾಳಿಕೆಯಾಗಿದೆ ಎಂದವರು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವಮೋದಿ ಅವರ ಒಕ್ಕೂಟ ವ್ಯವಸ್ಥೆ ಸಹಕಾರಿಯಾಗಿಲ್ಲ, ಅದು ದಬ್ಬಾಳಿಕೆಯಾಗಿದೆ ಎಂದಿದ್ದಾರೆ. ತೈಲ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯಗಳನ್ನು ದೂಷಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಮೋದಿಯವರ ಒಕ್ಕೂಟ ವ್ಯವಸ್ಥೆ ಸಹಕಾರಿಯಾಗಿಲ್ಲ, ದಬ್ಬಾಳಿಕೆ ಮಾಡುತ್ತಿದೆ ಎಂದವರು ಇದೇ ವೇಳೆ ಕಿಡಿ ಕಾರಿದ್ದಾರೆ.