ಮೈಸೂರು, ಏ 28 (DaijiworldNews/DB): ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್ಕ್ರೀಂ ಡಬ್ಬದಲ್ಲಿ ಬಚ್ಚಿಕುಳಿತುಕೊಂಡು ಲಾಕ್ ಆದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಂಜನಗೂಡು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯರನ್ನು ನಾಗರಾಜು ಮತ್ತು ಚಿಕ್ಕದೇವಮ್ಮ ಅವರ ಪುತ್ರಿ ಭಾಗ್ಯ (12) ಮತ್ತು ರಾಜನಾಯಕ-ಗೌರಮ್ಮ ದಂಪತಿಯ ಪುತ್ರಿ ಕಾವ್ಯ (7) ಮೃತಪಟ್ಟ ಬಾಲಕಿಯರು.
ಕಣ್ಣಾಮುಚ್ಚಾಲೆ ಆಟದಲ್ಲಿ ನಿರತರಾಗಿದ್ದ ಬಾಲಕಿಯರು ಮನೆಯ ಮುಂದೆ ಇಟ್ಟಿದ್ದ ಖಾಲಿ ಐಸ್ಕ್ರೀಂ ಬಾಕ್ಸ್ ಒಳಗೆ ಅವಿತು ಕುಳಿತಿದ್ದರು. ಆದರೆ ಮಕ್ಕಳು ಅಲುಗಾಡುವಾಗ ಬಾಕ್ಸ್ನ ಬಾಗಿಲು ಮುಚ್ಚಿಕೊಂಡು ಲಾಕ್ ಆಗಿದೆ. ಮಕ್ಕಳು ಬಾಕ್ಸ್ ಒಳಗೆ ಅವಿತಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ಮೇಲಿಂದ ಲಾಕ್ ಆದ ಬಾಗಿಲನ್ನು ಒಳಭಾಗದಿಂದ ತೆಗೆಯಲಾಗದೆ ಮಕ್ಕಳು ಉಸಿರುಗಟ್ಟಿ ಬಾಕ್ಸ್ ಒಳಗೇ ಸಾವನ್ನಪ್ಪಿದ್ದಾರೆ.
ಬಹಳ ಹೊತ್ತಾದರೂ ಬಾಲಕಿಯರು ಮನೆಯೊಳಗೆ ಬಾರದೇ ಇದ್ದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾಕ್ಸ್ನ ಬಾಗಿಲು ತೆರೆದು ನೋಡಿದಾಗ ಮಕ್ಕಳಿಬ್ಬರು ಸಾವನ್ನಪ್ಪಿರುವುದು ಗೊತ್ತಾಗಿದೆ.