ಬೆಂಗಳೂರು, ಏ 27 (DaijiworldNews/DB): ಇಂಧನದ ಮೇಲಿನ ರಾಜ್ಯಗಳ ತೆರಿಗೆ ಕಡಿಮೆ ಮಾಡಿ ಎಂದು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪ್ರಧಾನಿಗೆ ಐದು ಪ್ರಶ್ನೆಗಳನ್ನು ಎಸೆದಿದ್ದಾರೆ. ಈ ಪ್ರಶ್ನೆಗಳಿಗೆ ಶೀಘ್ರ ಪ್ರಧಾನಿಯವರು ಉತ್ತರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜಸ್ತಾನ, ಛತ್ತೀಸ್ ಘಡ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಬಗ್ಗೆ ಉಲ್ಲೇಖಿಸಿ ಪೆಟ್ರೋಲ್ ಬೆಲೆ ಕಡಿಮೆ ಮಾಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಮೊದಲು ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು.
ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವುದು ಯಾವಾಗ? ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟಿತ್ತು? ಈಗ ಎಷ್ಟಿದೆ? ಅದನ್ನು ಯಾವಾಗ ಕಡಿಮೆ ಮಾಡುತ್ತೀರಿ?
27 ಲಕ್ಷ ಕೋಟಿ ರೂ.ಗಳನ್ನು ಸೆಸ್ ನಿಂದ ಸಂಗ್ರಹ ಮಾಡಲಾಗಿದೆ. ನೀವು ಅಧಿಕಾರಕ್ಕೆ ಬಂದಾಗಿನಿಂದ ಮಾಡಿದ್ದೀರಾ? ಆಗ 480 ರೂ ಇದ್ದ. ಗ್ಯಾಸ್ ಸಿಲಿಂಡರ್ ಬೆಲೆ ಈಗ 1000 ರೂ.ಗೆ ಏರಿಕೆಯಾಗಿದೆ. ಇದರಲ್ಲಿ 150 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಯಾವಾಗ ಬೆಲೆ ಕಡಿಮೆ ಮಾಡುತ್ತೀರಿ? ಕೆಲವು ರಾಜ್ಯಗಳು ತೆರಿಗೆಯನ್ನೇ ತೆಗೆದಿವೆ. ನೀವು ಯಾಕೆ ಕೇಂದ್ರದ ಸೆಸ್ ಕಡಿಮೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.