ಪುಣೆ, ಏ 27 (DaijiworldNews/HR): ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿರುವ ಮಹಾರಾಷ್ಟ್ರದ ಪುಣೆಯ ಕುಟುಂಬವೊಂದು ಮಗುವನ್ನು ಹೆಲಿಕಾಪ್ಟರ್ನಲ್ಲಿ ಮನೆಗೆ ಕರೆತರುವ ಮೂಲಕ ಅದ್ಧೂರಿ ಸ್ವಾಗತ ಕೋರಿದ್ದಾರೆ.
ರೈತ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಅವರು ತಮ್ಮ ಮೊಮ್ಮಗಳನ್ನು ಬಾಡಿಗೆ ಹೆಲಿಕ್ಯಾಪ್ಟರ್ ಪಡೆದು ಕರೆ ತಂದಿದ್ದು, ಈ ಸುದ್ದಿ ವೈರಲ್ ಆಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಅಜಿತ್ ಪಾಂಡುರಂಗ, ಮೊಮ್ಮಗಳು ಕ್ರುಶಿಕಾಗೆ ಭವ್ಯವಾದ ಸ್ವಾಗತ ನೀಡುವ ಆಸೆಯಿತ್ತು. ಹಾಗಾಗಿ ಸಮೀಪದ ಶೆವಾಲ್ ವಾಡಿಯಿಂದ ಮಗು ಮತ್ತು ತಾಯಿಯನ್ನು ಹೆಲಿಕ್ಯಾಪ್ಟರ್ನಲ್ಲಿ ಮನೆಗೆ ಕರೆದಕೊಂಡು ಬರಲಾಗಿದೆ ಎಂದರು.