ನವದೆಹಲಿ, ಏ 27 (DaijiworldNews/MS): 'ವಿವಿಧತೆಯಲ್ಲಿ ಏಕತೆ' ಎಂಬ ಪದ ಉದಾಹಣೆ ಎಂಬಂತೆ ಭಾರತೀಯ ಸೇನಾ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಪಿ ಪಾಂಡೆ , ಇತರ ಹಿರಿಯ ಅಧಿಕಾರಿಗಳು ಮತ್ತು ಅವರ ಪಡೆಯೊಂದಿಗೆ ಕಾಶ್ಮೀರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಪೋಟೋ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ.
ರಂಜಾನ್ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಅವರು ಸಿಖ್ ಅಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಪ್ರಾರ್ಥನೆ ಮಾಡುವುದನ್ನು ಫೋಟೋದಲ್ಲಿ ಕಾಣಬಹುದು. ಇಫ್ತಾರ್ ಕೂಟದ ಸರಣಿ ಚಿತ್ರಗಳನ್ನು ಸೇನೆ ಸೋಮವಾರ ಬಿಡುಗಡೆ ಮಾಡಿದೆ.
ಟ್ವಿಟರ್ನಲ್ಲಿ ಸಹ ಬಳಕೆದಾರರು ಈ ಕೋಮು ಸೌಹಾರ್ದತೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸಿ ಸರಿಯಾದ ಉದಾಹರಣೆ ನೀಡಿದೆ ಭಾರತೀಯ ಸೇನೆಯಲ್ಲಿನ ಜಾತ್ಯತೀತ ಸಂಪ್ರದಾಯಕ್ಕೆ ಸೆಲ್ಯೂಟ್" ಎಂದಿದ್ದಾರೆ
ಧರ್ಮದ ಹೆಸರಿನಲ್ಲಿ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುವ ಸಂಗತಿಗಳಿಗೆ ಇದು ಸೌಹಾರ್ದತೆಯ ಸಂದೇಶ. ಇದು ನಮ್ಮ ಭಾರತ ಮತ್ತು ನಾವು ಅದರ ಬಗ್ಗೆ ಹೆಮ್ಮೆ ಪಡುತ್ತೇವೆ ಎಂಬ ಒಬ್ಬ ಬಳಕೆದಾರರ ಸಾಲು ಗಮನ ಸೆಳೆಯುತ್ತಿದೆ.