ವಡ್ಗಾಂವ್, ಏ 27 (DaijiworldNews/HR): ಟೈಲರಿಂಗ್ ಅಂಗಡಿಯಲ್ಲಿ ಕೆಲಸದಿಂದ ವಜಾಗೊಳಿಸಿದಕ್ಕೆ ಕೋಪಗೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಎಂದು ಪುಣೆ ನಗರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತರನ್ನು ಮಿಲಿಂದ್ ನಾಥಸಾಗರ್ (35) ಮತ್ತು ಬಾಲಾ ನೊಯಾ ಜೋನಿಂಗ್ (32) ಎಂದು ಗುರುತಿಸಲಾಗಿದೆ.
ಇನ್ನು ಈ ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ ಅವರ ನೆರೆಹೊರೆಯವರಾದ ಪ್ರಶಾಂತ್ ಕುಮಾರ್ ದೇಬ್ನಾರ್ (26) ಅವರಿಗೆ 35% ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಚಂದನ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಸುನಿಲ್ ಜಾಧವ್ ಮಾಹಿತಿ ನೀಡಿದ್ದು, ಟೈಲರಿಂಗ್ ಅಂಗಡಿಯಲ್ಲಿ ಕೆಲಸದಿಂದ ವಜಾಗೊಳಿಸಿದಕ್ಕೆ ಕೋಪಗೊಂಡು ನಾಥಸಾಗರ್ ಎಂಬವರು ಪೆಟ್ರೋಲ್ ಸುರಿದು ಅಂಗಡಿಗೆ ಬೆಂಕಿ ಹಚ್ಚಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.