ಹುಬ್ಬಳ್ಳಿ, ಏ 26 (DaijiworldNews/SM): ಸಿದ್ದರಾಮಯ್ಯ ಓರ್ವ ಅಸಮರ್ಥ ನಾಯಕ. ಅವರು 5 ವರ್ಷ ಆಳ್ವಿಕೆ ನಡೆಸಿದ್ದಾರೆ. ಆದರೆ, ಸಿದ್ದರಾಮಯ್ಯರಷ್ಟು ಅಸಮರ್ಥ ನಮ್ಮ ಗೃಹ ಸಚಿವರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಆಡಳಿತ ಸಂದರ್ಭದಲ್ಲಿ ಅತೀ ಹೆಚ್ಚು ಗಲಭೆಯಾಗಿದೆ. ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯದೆಲ್ಲೆಡೆ ಗಲಭೆ ನಡೆದಿತ್ತು. ಗಲಭೆ ನಿಯಂತ್ರಿಸಲು ಸಿದ್ದರಾಮಣ್ಣರವರಿಂದ ಸಾಧ್ಯವಾಗಲಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದೆಲ್ಲೆಡೆ 23 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಯಾವೊಬ್ಬ ಆರೋಪಿಯನ್ನು ಕೂಡ ಬಂಧಿಸಿರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.