ನವದೆಹಲಿ, ಏ 26 (DaijiworldNews/HR): ಮಕ್ಕಳನ್ನು ಅವರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕ ವಯಸ್ಸಿನಲ್ಲಿಯೇ ಶಾಲೆಗಳಿಗೆ ಕಳುಹಿಸಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ನ್ಯಾಯಪೀಠ, ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಒಂದು ರೀತಿಯ ನೂಕುನುಗ್ಗಲು ಇದೆ. ಪೋಷಕರು ತಮ್ಮ ಮಕ್ಕಳಿಗೆ ಎರಡು ವರ್ಷ ವಯಸ್ಸಾದ ಕೂಡಲೇ ಪ್ರಾರಂಭಿಸಲು ಬಯಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯಕ್ಕೆ ಅನುಕೂಲಕರವಾಗಿಲ್ಲದಿರಬಹುದು ಎಂದು ಅಭಿಪ್ರಾಯಪಟ್ಟಿದೆ.
1 ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ಆರು ವರ್ಷಗಳ ವಯಸ್ಸಿನ ಮಾನದಂಡವನ್ನು ಪ್ರಶ್ನಿಸಿ ಪೋಷಕರ ಗುಂಪು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದ್ದು, ದೆಹಲಿ ಹೈಕೋಟ್ ಏಪ್ರಿಲ್ 11 ರ ಆದೇಶವನ್ನು ಪ್ರಶ್ನಿಸಿದ ಪೋಷಕರು, ಕೇಂದ್ರೀಯ ವಿದ್ಯಾಲಯ ಸಂಘಥಾನ್ (ಕೆವಿಎಸ್) ಮಾರ್ಚ್ 2022 ರಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಕೇವಲ ನಾಲ್ಕು ದಿನಗಳ ಮೊದಲು 1 ರಿಂದ 6 ವರ್ಷಗಳ ಪ್ರವೇಶ ಮಾನದಂಡವನ್ನು ಇದ್ದಕ್ಕಿದ್ದಂತೆ ಬದಲಾಯಿಸಿದೆ ಎಂದು ಹೇಳಿದ್ದಾರೆ.
ಇನ್ನು ಮಗುವನ್ನು ಶಾಲೆಗೆ ಸೇರಿಸಲು ಸರಿಯಾದ ವಯಸ್ಸು ಇದೆ ಎಂದು ತೋರಿಸಲು ಅಧ್ಯಯನಗಳಿದ್ದು, ಮಗುವನ್ನು ಹೆಚ್ಚು ತಳ್ಳಬೇಡಿ. ಇದು ಗ್ರಹಿಸುವ ಮತ್ತು ಓದುವ ಅವನ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಮಾನಸಿಕ ಪರಿಣಾಮ ಉಂಟಾಗಬಹುದು ಎಂದು ಹೇಳಿದೆ.