ರಾಂಚಿ, ಏ 26 (DaijiworldNews/MS): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಅವರು ಜಾರ್ಖಂಡ್ ರಾಜ್ಯದಲ್ಲಿ ನಿರಂತರ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಾಕ್ಷಿ ಸಿಂಗ್ ಅವರು "ಜಾರ್ಖಂಡ್ನ ತೆರಿಗೆ ಪಾವತಿದಾಳಾಗಿರುವ ನನಗೆ ಜಾರ್ಖಂಡ್ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯಲು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಸಾಕ್ಷಿ ಧೋನಿ ಮಾಡಿರುವ ಕೊನೆಯ ಟ್ವೀಟ್ ಒಂದು ವರ್ಷದ ಹಿಂದೆ ಆಗಿತ್ತು.
ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ಕಂಡುಬರುತ್ತಿರುವುದರಿಂದ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್ನಿಂದ ಬಳಲುತ್ತಿದ್ದಾರೆ.
ಬಿಸಿಗಾಳಿಯು ಪಶ್ಚಿಮ ಸಿಂಗ್ಭೂಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಆವರಿಸಿದ್ದು, ಇದು ಏಪ್ರಿಲ್ 28 ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಹರಡುವ ಸಾಧ್ಯತೆಯಿದೆ.
ಜಾರ್ಖಂಡ್ ರಾಜ್ಯದಲ್ಲಿ ನಿರಂತರ ಲೋಡ್ ಶೆಡ್ಡಿಂಗ್ನಿಂದಾಗಿ ಸಾಮಾನ್ಯ ಜನರು ಮಾತ್ರವಲ್ಲದೇ ಶ್ರೀಮಂತರು ಕೂಡ ಸಮಸ್ಯೆ ಎದುರಿಸುವಂತಾಗಿದೆ.