ಮುಂಬಯಿ, ಏ 25 (DaijiworldNews/DB): ದುಬಾರಿ ಬೆಲೆಯ ಪೇಟಿಂಗ್ನ್ನು ಪ್ರಿಯಾಂಕಾ ವಾಧ್ರಾರಿಂದ ಖರೀದಿಸಲು ಕಾಂಗ್ರೆಸ್ ನನಗೆ ತೀವ್ರ ಒತ್ತಡ ಹೇರಿತ್ತು ಎಂದು ಯೆಸ್ ಬ್ಯಾಂಕ್ನ ಸಹ ಸಂಸ್ಥಾಪಕ ರಾಣಾ ಕಪೂರ್ ಇ.ಡಿ. ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ಪ್ರಿಯಾಂಕಾ ವಾದ್ರಾ ಬಳಿ ಇದ್ದ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ರ ಪೇಂಟಿಂಗ್ನ್ನು 2 ಕೋಟಿ ರೂ.ಗಳಿಗೆ ಖರೀದಿಸುವಂತೆ ಕಾಂಗ್ರೆಸ್ ನಾಯಕ, ಅಂದಿನ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಸೂಚನೆ ನೀಡಿದ್ದರು. ಖರೀದಿಸದೇ ಇದ್ದಲ್ಲಿ ಪದ್ಮಭೂಷಣ ಪಡೆಯುವುದಾಗಲೀ, ಗಾಂಧಿ ಕುಟುಂಬದೊಂದಿಗೆ ಸಂಬಂಧ ಇಟ್ಟುಕೊಳ್ಳುವುದಾಗಲೀ ಸಾಧ್ಯವಿಲ್ಲ ಎಂದಿದ್ದರು ಎಂದು 5,050 ಕೋಟಿ ರೂ. ವಂಚನೆ ಪ್ರಕರಣ ಆರೋಪ ದಲ್ಲಿ ಬಂಧಿತರಾಗಿರುವ ರಾಣಾ ಕಪೂರ್ ಹೇಳಿದ್ದಾರೆ. ಇ.ಡಿ.ಯು ವಿಶೇಷ ಕೋರ್ಟ್ ಮುಂದೆ ಸಲ್ಲಿಸಿರುವ 2ನೇ ಹಂತದ ಚಾರ್ಜ್ಶೀಟ್ನಲ್ಲಿ ಈ ಹೇಳಿಕೆಗಳನ್ನು ದಾಖಲಿಸಿದೆ.
ಪೇಂಟಿಂಗ್ ಮಾರಾಟದಿಂದ ಬಂದ ಹಣವನ್ನು ಸೋನಿಯಾ ಗಾಂಧಿ ಅವರು ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗಾಂಧಿ ಕುಟುಂಬ ಬಳಸಿಕೊಂಡಿತ್ತು ಎಂದಿದ್ದಾರೆ.