ತಿರುವನಂತಪುರ, ಏ 25 (DaijiworldNews/MS): ವೈದ್ಯಕೀಯ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಸಲುವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ 18 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ.
ಅವರೊಂದಿಗೆ ಪತ್ನಿ ಕಮಲಾ, ಆಪ್ತ ಸಹಾಯಕ ಸುನೀಶ್ ಕೂಡಾ ದುಬೈ ಮೂಲಕ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ನ್ಯೂಯಾರ್ಕ್ ನ ಮಾಯೋ ಕ್ಲಿನಿಕ್ ಆಸ್ಪತ್ರೆಯಲ್ಲಿ ಕೇರಳ ಸಿಎಂ ಚಿಕಿತ್ಸೆ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಪಿಣರಾಯಿ ತಮ್ಮ ಹುದ್ದೆಯ ಅಧಿಕಾರವನ್ನು ಯಾರಿಗೂ ನೀಡಿಲ್ಲ . ಅಮೇರಿಕಾದಲ್ಲಿ ಇದ್ದುಕೊಂಡೇ ಏ.27 ರಂದು ವರ್ಚುವ ಆಗಿ ಸಂಪುಟ ಸಭೆಯಲ್ಲಿ ಪಿಣರಾಯಿ ಪಾಲ್ಗೊಳ್ಳಲಿದ್ದಾರೆ. ಇ-ಫೈಲ್ ವ್ಯವಸ್ಥೆಯ ಮೂಲಕ ಆಡಳಿತ ನಡೆಸಲಿದ್ದು ಆನ್ಲೈನ್ ಮೂಲಕ ಪೊಲೀಸ್ ಮತ್ತು ಸರ್ಕಾರಿ ಸಚಿವಾಲಯದಿಂದ ್ ದೈನಂದಿನ ಸಂಕ್ಷಿಪ್ತ ಮಾಹಿತಿಯನ್ನು ಪಡೆಯಲಿದ್ದರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕೂಡ ಮೇ ತಿಂಗಳ ಆರಂಭದಲ್ಲಿ ವೈದ್ಯಕೀಯ ಪರಿಶೀಲನೆಗಾಗಿ ಅಮೆರಿಕಕ್ಕೆ ತೆರಳುವ ನಿರೀಕ್ಷೆಯಿದೆ.