ಮೈಸೂರು, ಏ 24 (DaijiworldNews/DB): ಭಾರತದಲ್ಲಿ ಹಿಂದೂ-ಮುಸ್ಲಿಮರ ಡಿಎನ್ಎಗಳು ಒಂದೇ ಆಗಿವೆ. ಇದು ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿಯೂ ಖಾತರಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮೈಸೂರು ಹಿಂದೂ ಫೋರಂ ಆಶ್ರಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈದರಾಬಾದಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಸಾಬೀತಾದ ಪ್ರಕಾರ ಹಿಂದೂ-ಮುಸ್ಲಿಮರ ಡಿಎನ್ಎ ಬೇರೆ ಬೇರೆಯಲ್ಲ ಎಂಬುದು ಗೊತ್ತಾಗಿದೆ ಎಂದರು.
ಹಿಂದೂ ಮಹಾರಾಜರುಗಳು ಹೊರಗಿನವರ ಆಕ್ರಮಣವನ್ನು ಸಹಿಸದೇ ಪ್ರತಿಭಟಿಸಿದ ಕಾರಣ ಭಾರತದಲ್ಲಿ ಶೇ. 80ರಷ್ಟು ಹಿಂದೂಗಳು ಭದ್ರವಾಗಿ ಉಳಿದುಕೊಂಡಿದ್ದಾರೆ ಎಂದವರು ಇದೇ ವೇಳೆ ತಿಳಿಸಿದರು.
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಮುಂದೆ ಕಾಶಿ ಮತ್ತು ಕೃಷ್ಣ ಜನ್ಮ ಭೂಮಿ ನಿರ್ಮಾಣದ ಗುರಿ ಹೊಂದಲಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಎಲ್ಲಾ ವಿವಾದಗಳನ್ನು ಶಾಂತವಾಗಿಯೇ ಬಗೆಹರಿಸುವ ಪ್ರಯತ್ನ ನಡೆಯಲಿದೆ ಎಂದರು.