ಬೆಳಗಾವಿ, ಏ 24 (DaijiworldNews/DB): ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಟ್ವೀಟರ್ ಖಾತೆ ಹ್ಯಾಕ್ ಆಗಿರುವ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎರಡು ದಿನಗಳ ಹಿಂದೆ ಅವರ ಟ್ವೀಟರ್ ಖಾತೆ ಹ್ಯಾಕ್ ಆಗಿದ್ದು, ತಡವಾಗಿ ಗಮನಕ್ಕೆ ಬಂದಿದೆ.
ಹೀಗಾಗಿ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನನ್ನ ಟ್ವಿಟರ್ ಖಾತೆ ನಿಷ್ಕ್ರಿಯವಾಗಿದ್ದು, ಖಾತೆ ತೆರೆಯದಂತೆ ಮಾಡಲಾಗಿದೆ. ಯಾವುದೇ ಅಸಂಬದ್ದ ಪೋಸ್ಟ್ಗಳು ನನ್ನ ಟ್ವಿಟರ್ ಖಾತೆಯಿಂದ ಬಂದಲ್ಲಿ ಅದನ್ನು ನಾನು ಮಾಡಿರುವ ಪೋಸ್ಟ್ ಎಂದು ಪರಿಗಣಿಸಬಾರದು ಎಂಬುದಾಗಿ ಜನರಲ್ಲಿ ಮನವಿ ಮಾಡಿದ್ದಾರೆ.