ನವದೆಹಲಿ, ಏ 24 (DaijiworldNews/DB): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಪಠ್ಯಪುಸ್ತಕದಲ್ಲಿ ’ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ’ ಎಂಬ ಅಧ್ಯಾಯವನ್ನೇ ಕೈ ಬಿಟ್ಟಿದೆ. ಸದ್ಯ ಈ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗಿದೆ.
10, 11 ಮತ್ತು 12ನೇ ತರಗತಿಯ ಪಠ್ಯದಿಂದ ವಿವಿಧ ಅಧ್ಯಾಯಗಳನ್ನು ಕೈಬಿಡಲಾಗಿದೆ. 11 ಮತ್ತು 12ನೇ ತರಗತಿಯ ಇತಿಹಾಸ ಮತ್ತು ರಾಜ್ಯಶಾಸ್ತ್ರ ಪಠ್ಯದಲ್ಲಿದ್ದ ಅಲಿಪ್ತ ಚಳವಳಿ, ಶೀತಲ ಸಮರದ ಯುಗ, ಆಫ್ರಿಕಾ-ಏಷ್ಯಾ ಪ್ರಾಂತ್ಯಗಳಲ್ಲಿ ಇಸ್ಲಾಂ ಸಾಮ್ರಾಜ್ಯಗಳ ಉಗಮ ಹಾಗೂ ವಿಸ್ತರಣೆ, ಮೊಘಲರ ಕೋರ್ಟ್ಗಳ ವೃತ್ತಾಂತಗಳು, ಕೈಗಾರಿಕಾ ಕ್ರಾಂತಿಯ ಪಾಠಗಳನ್ನು ತೆಗೆದು ಹಾಕಲಾಗಿದೆ. 10ನೇ ತರಗತಿಯ ಪಠ್ಯದಿಂದ ’ಕೃಷಿಯ ಮೇಲೆ ಜಾಗತೀಕರಣದ ಪ್ರಭಾವ’ ಎಂಬ ಅಧ್ಯಾಯವನ್ನು ಕೈ ಬಿಡಲಾಗಿದೆ.
ಆದರೆ ಪಠ್ಯಗಳಿಂದ ಕೆಲವು ಅಧ್ಯಾಯಗಳನ್ನು ತೆಗೆದು ಹಾಕಿರುವ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಎನ್ಸಿಇಆರ್ಟಿ ಶಿಫಾರಸ್ಸು ಮೇರೆಗೆ ಈ ರೀತಿ ಮಾಡಲಾಗಿದೆ ಎಂದಿದ್ದಾರೆ.