ದಾವಣಗೆರೆ, ಏ 23 (DaijiworldNews/HR): ಹಾಲ್ ಟಿಕೆಟ್ ಪಡೆಯುವಾಗ ಬೇಡವಾಗಿದ್ದ ಹಿಜಾಬ್ ಪರೀಕ್ಷೆ ಬರೆಯಲು ಬೇಕಾಯಿತೆ.? ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಾಲ್ ಟಿಕೆಟ್ ಪಡೆಯುವಾಗ ಬೇಡವಾಗಿದ್ದ ಹಿಜಾಬ್ ಪರೀಕ್ಷೆ ಬರೆಯಲು ಬೇಕಾಯಿತೆ.? ಹೈಕೋರ್ಟ್ ಆದೇಶ ಪಾಲಿಸದೇ ಪರೀಕ್ಷಾ ಕೇಂದ್ರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿರುವ ಆ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಶುಕ್ರವಾರದಿಂದ ಆರಂಭಗೊಂಡಂತ ದ್ವಿತೀಯ ಪಿಯು ಪರೀಕ್ಷೆಗೆ, ಹಿಜಾಬ್ ಧರಿಸೋದಕ್ಕೆ ಆಗ್ರಹಿಸಿ ಅನುಮತಿಗಾಗಿ ಹೈಕೋರ್ಟ್ ಬಳಿಕ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಂತ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು, ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಹಾಲ್ ಟಿಕೆಟ್ ಪಡೆದು, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿದ್ದರು.