ಬೆಂಗಳೂರು, ಏ 22 (DaijiworldNews/DB): ದೇಶಕ್ಕೆ ರಾಹುಲ್ ಗಾಂಧಿಯವರ ಕೊಡುಗೆ ಶೂನ್ಯ. ಅವರು ಕದ್ದ ಉಪನಾಮ ತೆಗೆದು ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರೊಬ್ಬ ಕ್ಷುಲ್ಲಕ ಕುಟುಂಬದ ರಾಜಕಾರಣಿ. ಅವರು ಕದ್ದ ಉಪನಾಮ ತೆಗೆದು ದೇಶದ ಯಾವುದೇ ಭಾಗದಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಲಿ ನೋಡೋಣ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಆದರೆ ದೇಶಕ್ಕೆ ರಾಹುಲ್ ಗಾಂಧಿ ಕೊಡುಗೆ ಏನಿಲ್ಲ. ಶೂನ್ಯ ಕೊಡುಗೆಯಷ್ಟೇ ಅವರಿಂದ ಸಿಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.